ಸಾವಯವ ಕೃಷಿ ಸಾವಿಲ್ಲದ ಕೃಷಿ, ಸನಾತನ ಕೃಷಿ. ಒಂದು ಕಾಲದಲ್ಲಿ ರಾಸಾಯನಿಕಗಳನ್ನು ಬಳಸದೇ ನೈಸರ್ಗಿಕವಾಗಿ ಬೆಳೆದ ಆಹಾರ ತಿಂದು ಜನ ಸದೃಢವಾಗಿದ್ದರು. ಹಸಿರು ಕ್ರಾಂತಿಯ ನಂತರ ಹೆಚ್ಚಿದ ರಾಸಾಯನಿಕ ಬಳಕೆಯಿಂದ ಮಣ್ಣು ಮಲಿನವಾಗಿ ಆಹಾರದ ಪೌಷ್ಠಿಕತೆ ನಶಿಸಿಹೋಗಿದೆ. ಇದನ್ನು ಅರ್ಥ ಮಾಡಿಕೊಂಡಿರುವ ಜನರು ಈಗ ನಿಧಾನವಾಗಿ ಸಾವಯವ ಬೆಳೆಗಳಿಗೆ ಪ್ರಾಮುಖ್ಯತೆ ಕೊಡುತ್ತಿದ್ದಾರೆ. ಹೀಗಾಗಿ ರೈತರೂ ಕೂಡ ಸಾವಯವ ಕೃಷಿ ಕಡೆ ಹೆಚ್ಚು ಒಲವು ತೋರಿಸುತ್ತಿದ್ದಾರೆ.
ಡಾ.ಸಾಯಿಲ್ ಜೈವಿಕ ಗೊಬ್ಬರಗಳನ್ನು ಬಳಸಿ ಸಾವಯವ ಕೃಷಿ ಮಾಡುವುದರಿಂದ ಮಣ್ಣು ಫಲವತ್ತಾಗಿರುವುದನ್ನು ರೈತ ಕಂಡುಕೊಂಡಿದ್ದಾರೆ. ಎರೆಹುಳುಗಳು ಮತ್ತು ಮಣ್ಣಿನ ಉಪಕಾರಿ ಸೂಕ್ಷ್ಮಜೀವಿಗಳು ಹೆಚ್ಚಾಗಿ ಮಣ್ಣು ಸಡಿಲಗೊಂಡು ಗಾಳಿ ಆಡುವಂತಾಗುತ್ತದೆ. ಇದರಿಂದ ಮಣ್ಣು ಮೃದುವಾಗಿ ಜೈವಿಕ ಕ್ರಿಯೆಗೆ ಸೂಕ್ತವಾದ ವಾತಾವರಣ ಸೃಷ್ಟಿಯಾಗುತ್ತದೆ. ಇದರ ಪರಿಣಾಮವಾಗಿ ನೀರು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಹೆಚ್ಚಾಗುತ್ತದೆ. ಹಾಗಾಗಿ ಸಾವಯವ ಕೃಷಿ ಮಾಡುವುದರಿಂದ ಮಣ್ಣಿನ ಫಲವತ್ತತೆ ಹೆಚ್ಚಿ ಪೋಷಕಾಂಶಗಳ ಲಭ್ಯತೆ ಹೆಚ್ಚಾಗುತ್ತದೆ.
ಬಾಗಲಕೋಟೆ: ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲ್ಲೂಕಿನ ರಾಮಣ್ಣ ಹನಮಣ್ಣನವವರು ಹಲವಾರು ವರ್ಷಗಳಿಂದ ಸಾವಯವ ಬೆಲ್ಲವನ್ನು ತಯಾರಿಸುವ ಪ್ರಕ್ರಿಯೆಯಲ್ಲಿ ತೊಡಗಿಸಿಕೊಂಡಿದ್ದು, ಸಾವಯವ ಪದ್ದತಿಯಲ್ಲಿ ಬೆಳೆದಿರುವ ಕಬ್ಬಿನ ತೋಟವನ್ನು ಖರೀದಿಸಿ, ಕಬ್ಬನ್ನು ಕಟಾವು ಮಾಡಿ ಯಾವುದೇ ರಾಸಾಯನಿಕ ವಸ್ತುಗಳನ್ನು ಬಳಸದೆ ಬೆಲ್ಲವನ್ನು ತಯಾರಿಸುತ್ತಾರೆ.
ದಾವಣಗೆರೆ ಜಿಲ್ಲೆ: ಹೊನ್ನಾಳಿ ತಾಲ್ಲೂಕು, ಹನಗವಾಡಿ ಗ್ರಾಮದ ರೈತ – ಥಾನೇಶ್ ರಾವ್ ರವರು 3-4 ವರ್ಷಗಳಿಂದ ಡಾ.ಸಾಯಿಲ್ ಜೈವಿಕ ಗೊಬ್ಬರಗಳನ್ನುಉಪಯೋಗಿಸುತ್ತಿದ್ದು, ಬಳಸಿದ ನಂತರ ಅಡಿಕೆ ಬೆಳೆಯಲ್ಲಿಉತ್ತಮ ಬೆಳವಣಿಗೆ ಮತ್ತು ಅಭಿವೃದ್ಧಿ ಪಡೆದಿದ್ದಾರೆ.
ಮೈಸೂರುಜಿಲ್ಲೆ: ಮೈಸೂರುಜಿಲ್ಲೆ ಕೆಆರ್ ನಗರ ತಾಲ್ಲೂಕಿನ ರೈತರಾದ ನಟರಾಜ್ ಅವರು ಸಮಗ್ರ ಕೃಷಿ ಪದ್ಧತಿಯಲ್ಲಿ ಅಡಿಕೆ ತೋಟದಲ್ಲಿ ತೊಗರಿ, ಬಾಳೆ, ಅವರೆ, ಟೊಮೇಟೊ ಮತ್ತು ಬದನೆ ಇತ್ಯಾದಿ ಅಂತರ ಬೆಳೆಗಳನ್ನುಬೆಳೆಯುತ್ತಿದ್ದಾರೆ.
ತುಮಕೂರ : ತುಮಕೂರು ಜಿಲ್ಲೆ, ಮಧುಗಿರಿ ತಾಲ್ಲೂಕು ರೈತರಾದ ವಿಶ್ವನಾಥ್ ಅವರು 10 ವರ್ಷದಿಂದ ಸಾವಯವ ಕೃಷಿ ಪದ್ಧತಿಯಲ್ಲಿಯೇ ಅಡಿಕೆ ಬೆಳೆಯನ್ನು ಬೆಳೆಯುತ್ತಿದ್ದಾರೆ. ಕೃಷಿಯ ಜತೆಗೆ ಕುರಿ ಸಾಕಾಣಿಕೆ, ಜೇನು ಸಾಕಾಣಿಕೆಯನ್ನೂ ಮಾಡುತ್ತಿದ್ದಾರೆ.
ಮೈಸೂರು: ಮೈಸೂರು ಜಿಲ್ಲೆ, ಕೆ ಆರ್ ನಗರ ತಾಲ್ಲೂಕು ರೈತರಾದ ಮಹದೇವ ಅವರು ಭತ್ತ ಬೆಳೆಯನ್ನು ಸಾವಯವ ಕೃಷಿಯಲ್ಲಿ ಬೆಳೆಯುತ್ತಿದ್ದಾರೆ. ಭತ್ತ ಬೆಳೆ ನಿರ್ವಹಣೆ ರೈತರಿಗೆ ಒಂದು ದೊಡ್ಡ ಸವಾಲು. ಗೊಬ್ಬರದ ನಿರ್ವಹಣೆ, ನೀರಿನ ಸಮಸ್ಯೆ ಇವೆಲ್ಲವನ್ನು ನಿಭಾಯಿಸೋದು ಕಷ್ಟ ಸಾಧ್ಯವಾಗಿರುತ್ತದೆ.